ಪರಿಸರದ ಕತೆ (ಪೂರ್ಣಚಂದ್ರ ತೇಜಸ್ವಿ)

seeders: 1
leechers: 0
Added on August 30, 2012 by talegariin Books > Ebooks
Torrent verified.



ಪರಿಸರದ ಕತೆ (ಪೂರ್ಣಚಂದ್ರ ತೇಜಸ್ವಿ) (Size: 1.4 MB)
 parisarada kathe - pUrNachaMdra tEjasvi.djvu1.4 MB

Description

ಕೃತಿ: ಪರಿಸರದ ಕತೆ
ಬರೆದವರು: ಪೂರ್ಣಚಂದ್ರ ತೇಜಸ್ವಿ
ಮಾದರಿ: ದೇಜಾವು (djvu)
ಭಾಷೆ: ಕನ್ನಡ (kannaDa)
ಈ ಪುಸ್ತಕವನ್ನು ನೀವು http ಮೂಲಕ ಇಲ್ಲೂ ಪಡೆದುಕೊಳ್ಳಬಹುದು
ಶಶಿಧರ ಹೆಬ್ಬಾರ ಹಾಲಾಡಿ ಅವರ ಲೇಖನದಿಂದ:
ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಪುಸ್ತಕಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕತೆ"ಯೂ ಒಂದು ಎನ್ನಲು ಯಾವುದೇ ಹಿಂಜರಿಕೆ ಬೇಡ ಅನ್ನಿಸುತ್ತದೆ. ಪರಿಸರದ ಮೇಲೆ ಸ್ವಲ್ಪವಾದರೂ ಆಸಕ್ತಿ ಇರುವವರಿಗಂತೂ, ಈ ಪುಸ್ತಕವನ್ನು ಎಷ್ಟು ಬಾರಿ ಓದಿದರೂ ತೃಪ್ತಿ ಸಿಗಲಾರದು. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಪುಸ್ತಕದಲ್ಲಿ ತೇಜಸ್ವಿಯವರು ಗುರುತಿಸಿ, ದಾಖಲಿಸಿರುವ ಪರಿಸರದ ವ್ಯಾಪಾರಗಳನ್ನು ಎಷ್ಟು ಬಾರಿ ಓದಿದರೂ ಬೇಸರವಾಗದು. ಬದಲಿಗೆ ಒಂದೊಂದು ಹೊಸ ಓದಿನಲ್ಲೂ, ಹೊಸ ಹೊಸ ಅರ್ಥಗಳು ಸ್ಪುರಿಸುವಂತಹ ಸಂದರ್ಭ ಈ ಪುಸ್ತಕದ ಓದಿನಲ್ಲಿ ಎದುರಾದೀತು.
ಮೂಲತ: ವಾರಕ್ಕೊಮ್ಮೆ ಬರೆದ ಲೇಖನಗಳ ಸಂಗ್ರಹವೇ "ಪರಿಸರದ ಕತೆ". ಇದರಲ್ಲಿ ಹಲವು ಬರಹಗಳು "ಲಂಕೇಶ್ ಪತ್ರಿಕೆ" ಯಲ್ಲಿ ಆಗಾಗ ಪ್ರಕಟವಾದವುಗಳು. ಆದ್ದರಿಂದಲೇ ಇರಬಹುದು, ಒಂದಕ್ಕೊಂದು ಅಷ್ಟೇನೂ ಸಂಬಂಧ ಹೊಂದಿರದ ಬಿಡಿ ಬರಹಗಳ ಸ್ವರೂಪ ಇಲ್ಲಿನ ಬರಹಗಳಿಗಿದೆ. ಆದರೆ, ಪರಿಸರದ ದೃಷ್ಟಿಯಿಂದ ನೋಡಿದರೆ, ಎಲ್ಲವೂ ಒಂದು ಹಂದರದೊಳಗೆ ಅಡಕವಾಗುವ ಗುಣವನ್ನು ಹೊಂದಿವೆ ಇಲ್ಲಿನ ಬರಹಗಳು. ಯಾವುದಕ್ಕೂ ಸಂಬಂಧಪಡದಂತೆ ಕಾಣುವ, ಅನುಭವ ಕಥನದ ರೂಪದಲ್ಲಿರುವ "ಕಿವಿಯೊಡನೆ ಒಂದು ದಿನ" ಲೇಖನವನ್ನೇ ತೆಗೆದುಕೊಳ್ಳಿ. ತನ್ನ ನಾಯಿಯಾದ "ಕಿವಿ"ಯ ಜೊತೆ ಲೇಖಕರು ಒಂದು ದಿನ ಕಳೆದ ಅನುಭವದ ವಿವರಗಳು ಅಲ್ಲಿವೆ. ಗೆಳೆಯರೊಡನೆ ನಡೆಸಿದ ಹಂದಿಬೇಟೆಯ ವಿವರಗಳೇ ಈ ಲೇಖನದ ತಿರುಳು. ಕಿವಿ ಎಂಬ ನಾಯಿಯನ್ನು ಮನುಷ್ಯನಿಗೆ ಸಮಾನವಾಗಿ ಪರಿಗಣಿಸುವ ವಿಚಾರ ಇಲ್ಲಿ ಮುಖ್ಯವಾಗಿ ಕಾಣಬರುತ್ತದೆ. ತೇಜಸ್ವಿಯವರು ಬೇರೊಂದು ಕಡೆ ಸಹಾ, ತನ್ನ ನಾಯಿಯನ್ನು ಮನುಷ್ಯನ ರೀತಿಯೇ ನೋಡುತ್ತಿದ್ದೆ ಎಂದು ಬರೆದುಕೊಂಡಿರುವರು. "ಹಂದಿಯನ್ನು ಹೊರಿಸಿದ್ದೇ ತಡ, ಶ್ರೀ ರಾಮ್ ಮತ್ತು ಕಿವಿ ಇಬ್ಬರೂ ಮಾಯವಾದರು. . . . . ನಾನು ವಾಪಸ್ ಹೋದಾಗ ದಾರಿಯಲ್ಲಿ ಕಿವಿ, ಶ್ರೀ ರಾಮ್ ಇಬ್ಬರೂ ಕಂಡರು. ಭೂತನ ಕಾಡು ತೋಟದ ಬೇಲಿ ಒಳಗೆ ಹಂದಿಯನ್ನು ಹೊತ್ತು ಹಾಕಿ, ಮರದ ನೆರಳಿನಲ್ಲಿ ನಿದ್ದೆ ಮಾಡುತ್ತಾ ಮಲಗಿದ್ದರು." ಇಲ್ಲಿ ಮನುಷ್ಯನನ್ನು ಮತ್ತು ಕಿವಿ ಎಂಬ ನಾಯಿಯನ್ನು ಸಂಬೋಧಿಸುವಾಗ ಸಮಾನರೀತಿಯಲ್ಲಿ ಪರಿಗಣಿಸಿದ್ದು ಸ್ಪಷ್ಟವಾಗಿ ಕಾಣುತ್ತದೆ.

Sharing Widget


Download torrent
1.4 MB
seeders:1
leechers:0
ಪರಿಸರದ ಕತೆ (ಪೂರ್ಣಚಂದ್ರ ತೇಜಸ್ವಿ)