ಕೇಶಿರಾಜನ ಶಬ್ದಮಣಿದರ್ಪಣ (shabadamaNidarpaNa - kEshirAja)

seeders: 1
leechers: 0
Added on August 31, 2012 by talegariin Books > Ebooks
Torrent verified.




Description

ಪುಸ್ತಕದ ಹೆಸರು: ಶಬ್ದಮಣಿದರ್ಪಣ (shabdamaNidarpaNa)
ಬರೆದವರು: ಕೇಶಿರಾಜ (ಕೇಶವ) (kEsirAja)
ಸಂಪಾದಕರು: ಕಿಟ್ಟೆಲ್, ಪಂಜೆ ಮಂಗೇಶರಾಯರು
ಪುಟಗಳು: ೪೭೯
ಮಾದರಿ: ಪೀಡಿಎಫ಼್
ಭಾಷೆ: ಕನ್ನಡ (kannaDa)
ಈ ಪುಸ್ತಕವನ್ನು ಇಲ್ಲಿ ಮತ್ತು ಇಲ್ಲಿ http ನಲ್ಲಿ ಪಡೆಯಬಹುದು.
(ಕೆಳಗಿನ ಕಿರುಪರಿಚಯ, ಪುಟದಿಂದ)
ಕಿರು ಪರಿಚಯ: ಶಬ್ದಮಣಿದರ್ಪಣವು ಕನ್ನಡದ ಪ್ರಾಚೀನ ವ್ಯಾಕರಣ ಗ್ರಂಥಗಳಲ್ಲಿ ಒಂದು. ಅದನ್ನು ಕೇಶಿರಾಜನು ಸುಮಾರು ಕ್ರಿ.ಶ. ೧೨೬೦ ರಲ್ಲಿ ಬರೆದನು. ಅವನು ಸಂಸ್ಕೃತದ ಕಾತಂತ್ರ ವ್ಯಾಕರಣದ ಮಾದರಿಯನ್ನು ಅನಸರಿಸಿದನು. ಈ ಪುಸ್ತಕದಲ್ಲಿ ಪೀಠಿಕಾ ಪ್ರಕರಣ ಮತ್ತು ಕೊನೆಯಲ್ಲಿ ಬರುವ ‘ಪ್ರಯೋಗಸಾರ’ ಎಂಬ ಹೆಸರಿನ ಚಿಕ್ಕ ಶಬ್ದಕೋಶವೂ ಸೇರಿದಂತೆ ಒಟ್ಟು ಹತ್ತು ಅಧ್ಯಾಯಗಳಿವೆ. ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು, ಅಪಭ್ರಂಶ ಮತ್ತು ಅವ್ಯಯಗಳು ಉಳಿದ ಎಂಟು ಪ್ರಕರಣಗಳು. ಅವು ಕನ್ನಡದ ಧ್ವನಿವ್ಯವಸ್ಥೆ, ಸಂಧಿಗಳು, ಸಮಾಸಗಳನ್ನು ರೂಪಿಸುವ ಬಗೆ, ನಾಮಪದಗಳು, ಕ್ರಿಯಾಪದಗಳು, ಪ್ರತ್ಯಯೀಕರಣ ಮುಂತಾದ ಹತ್ತು ಹಲವು ನುಡಿರಚನೆಗೆ ಸಂಬಂಧಿಸಿದ ಸಂಗತಿಗಳನ್ನು ವಿವರಿಸುತ್ತದೆ ಹಾಗೂ ಚರ್ಚಿಸುತ್ತದೆ. ಆದರಲ್ಲಿ ಒಟ್ಟು ೩೪೩ ಸೂತ್ರಗಳಿವೆ. ಶಬ್ದಮಣಿದರ್ಪಣವನ್ನು ಕಂದಪದ್ಯಗಳಲ್ಲಿ ರಚಿಸಲಾಗಿದೆ. ಆದರೆ, ಪ್ರತಿ ಸೂತ್ರಕ್ಕೂ ಸ್ವತಃ ಕೇಶಿರಾಜನೇ, ವಿವರಣಾತ್ಮಕವಾದ ವ್ಯಾಖ್ಯಾನವನ್ನು ಗದ್ಯದಲ್ಲಿ ಬರೆದಿದ್ದಾನೆ.(ವೃತ್ತಿ) ಅನಂತರದ ಶತಮಾನಗಳಲ್ಲಿ ನಿಟ್ಟೂರು ನಂಜಯ್ಯ ಮತ್ತು ಲಿಂಗಣಾರಾಧ್ಯರು ತಾವು ಬರೆದ ಟೀಕುಗಳಲ್ಲಿ ಈ ಚರ್ಚೆಯನ್ನು ಮುಂದುವರಿಸಿದ್ದಾರೆ. ಎಚ್.ಎಸ್. ಬಿಳಿಗಿರಿಯವರು ೧೦೬೯ ರಲ್ಲಿ, ಶಬ್ದಮಣಿದರ್ಪಣದ ಮೊದಲ ಎರಡು ಪ್ರಕರಣಗಳಿಗೆ ‘ಆಲೋಕ’ ಎಂಬ ಹೆಸರಿನ ವಿವರಣೆಯನ್ನು ಬರೆದಿದ್ದಾರೆ. ಇಲ್ಲಿ ಅವರು ಆಧುನಿಕ ಭಾಷಾವಿಜ್ಞಾನದ ತಿಳಿವಳಿಕೆಯನ್ನು ಬಳಸಿಕೊಂಡಿದ್ದಾರೆ. ‘ಶಬ್ದಮಣಿದರ್ಪಣ‘ ಪ್ರಾಚೀನ ಕನ್ನಡ ವ್ಯಾಕರಣಗಳಲ್ಲಿ ಮುಖ್ಯವಾದುದು, ಉತ್ತಮವಾದುದು. ಕೇಶಿರಾಜನ ಕಾಲದಲ್ಲಿ ಹಳಗನ್ನಡವು ನಡುಗನ್ನಡವಾಗಿ ಬದಲಾವಣೆ ಹೊಂದುತ್ತಿತ್ತು. ಅವನು ಆ ಬದಲಾವಣೆಗಳನ್ನು ಎಚ್ಚರಿಕೆಯಿಂದ ಗಮನಿಸಿ, ಪ್ರಾಮಾಣಿಕವಾಗಿ ವಿವರಿಸುತ್ತಾನೆ. ಆದರೆ, ಅವನಿಗೆ ಆವು ಒಪ್ಪಿಗೆಯಿಲ್ಲವೆಂದು ಕಟುವಾಗಿಯೇ ಹೇಳುತ್ತಾನೆ. ಸಂಸ್ಕೃತದ ವ್ಯಾಕರಣದ ಮಾದರಿಯನ್ನು ಬಳಸಿಕೊಂಡಿರುವುದು ಅವನಿಗೆ ಬಂಧನವಾಗಿಬಿಟ್ಟಿದೆ. ಕನ್ನಡಕ್ಕೆ ಸಹಜವಾದ ಅನೇಕ ಲಕ್ಷಣಗಳನ್ನು ವಿವರಿಸಲು ತನ್ನ ಮಾದರಿಗೆ ಸಾದ್ಯವಿಲ್ಲವೆಂದು ಅವನಿಗೂ ಗೊತ್ತು. ಆದರೂ ಅವನು ತನ್ನ ಪಟ್ಟು ಬಿಡುವುದಿಲ್ಲ. ಎಷ್ಟೋ ಸಲ ಅವನು ಕೊಡುವ ಸಮರ್ಥನೆಗಳು ಬಹಳ ದುರ್ಬಲವಾಗಿವೆ. ನಿಜವಾದ ಸಂಗತಿಗಳು ಢಾಳಾಗಿ ಕಣ್ಣಿಗೆ ಕಟ್ಟುತ್ತವೆ. ಅವನು ಖಡಾಖಂಡಿತವಾಗಿ, ಸರಿಯಲ್ಲವೆಂದು ಹೇಳಿದ ಅನೇಕ ಬದಲಾವಣೆಗಳು ನಡೆದೇ ನಡೆದವು. ಆದ್ದರಿಂದಲೇ ಅವನ ಕೃತಿಯು ಬದಲಾಗುತ್ತಿರುವ ಕನ್ನಡದ ಸ್ಥಿತಿಗತಿಗಳಿಗೆ ನಿಜವಾಗಿಯೂ ಕನ್ನಡಿ ಹಿಡಿಯುತ್ತವೆ. ಅವನು ಸೂತ್ರಗಳಿಗೆ ಕೊಟ್ಟಿರುವ ಉದಾಹರಣೆಗಳನ್ನು (ಪ್ರಯೋಗ) ವಿವಿಧ ಮೂಲಗಳಿಂದ ಆರಿಸಿಕೊಂಡಿದ್ದಾನೆ. ಅವುಗಳಲ್ಲಿ ಅನೇಕ ಪ್ರಯೋಗಗಳು ಈಗ ಸಿಕ್ಕಿರುವ ಹಾಗೂ ಸಿಕ್ಕದಿರುವ ಸಾಹಿತ್ಯಕೃತಿಗಳಿಂದ ಆರಿಸಿಕೊಂಡವು. ಆದರೆ, ಅವನು ಸಾಮಾನ್ಯವಾಗಿ ಮೂಲಕೃತಿಗಳನ್ನು ಹೆಸರಿಸುವುದಿಲ್ಲ. ಅವನ ಅಭಿರುಚಿ ಹಾಗೂ ಆಡುಮಾತು ಮತ್ತು ಸಾಹಿತ್ಯಕ ಭಾಷೆಗಳನ್ನು ಕುರಿತ ಅವನ ತಿಳಿವಳಿಕೆಯು ಅತ್ಯುತ್ತಮವಾದುದು. ಹದಿಮೂರನೆ ಶತಮಾನದಷ್ಟು ಹಿಂದೆಯೇ, ಸಂಸ್ಕೃತ ವ್ಯಾಕರಣವು ಹಾಕಿರುವ ಕಣ್ಕಟ್ಟುಗಳಿಂದ ಬಿಡಿಸಿಕೊಂಡು ಕನ್ನಡದ ನಿಜವಾದ ಸ್ವರೂಪವನ್ನು ಗಮನಿಸಿದ್ದು ಕೇಶಿರಾಜನ ದೊಡ್ಡ ಸಾಧನೆ. ಆದರೂ ಅವನು ಹೇಳುವ ಅನೇಕ ನಿಯಮಗಳು ಆಧುನಿಕ ಸನ್ನಿವೇಶದಲ್ಲಿ ಅಸಮರ್ಪಕವೆಂದೋ ಅಪೂರ್ಣವೆಂದೋ ತೋರುತ್ತವೆ.

Sharing Widget


Download torrent
18.8 MB
seeders:1
leechers:0
ಕೇಶಿರಾಜನ ಶಬ್ದಮಣಿದರ್ಪಣ (shabadamaNidarpaNa - kEshirAja)